ಬೆಂಗಳೂರು: ಕರ್ನಾಟಕದ ವಾಹನ ಮಾಲೀಕರು ಎದುರಿಸುತ್ತಿದ್ದ ದೀರ್ಘಕಾಲದ ಸಮಸ್ಯೆಯೊಂದಕ್ಕೆ ಈಗ ಅಧಿಕೃತವಾಗಿ ಪರಿಹಾರ ಸಿಕ್ಕಿದೆ.
ರಾಜ್ಯದ ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಅರ್ಥಾತ್ ಪಿಯುಸಿಸಿ ಮಾಹಿತಿಯನ್ನು ಕೇಂದ್ರ ಸರ್ಕಾರದ ವಾಹನ್ ಪೋರ್ಟಲ್ನೊಂದಿಗೆ ಸಂಯೋಜಿಸಲು ಕರ್ನಾಟಕ ಮುಂದಾಗಿದ್ದು, ವಾಹನ ಸವಾರರು ಟ್ರಾಫಿಕ್ ಫೈನ್ನಲ್ಲಿ ಸಾವಿರಾರು ರೂಪಾಯಿಗಳವರೆಗೆ ಉಳಿಸಬಹುದಾಗಿದೆ.
