ಕರ್ನಾಟಕ : ಕರಾವಳಿ ಪ್ರದೇಶದಲ್ಲಿ ನಾಳೆಯೇ (ಏಪ್ರಿಲ್ 10) ಈದ್ ಆಚರಿಸಲಾಗುತ್ತದೆ. ಕೇರಳದಲ್ಲಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿಯಲ್ಲಿ ನಾಳೆಯೇ ರಂಜಾನ್ ಆಚರಿಸಲು ತೀರ್ಮಾನಿಸಲಾಗಿದೆ.
ದಕ್ಷಿಣ ಕನ್ನಡ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಘೋಷಿಸಿದ್ದಾರೆ. ಇಂದು (ಏಪ್ರಿಲ್ 09) ಕೇರಳದಲ್ಲಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಕರಾವಳಿ ಭಾಗದ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿಯಲ್ಲಿ ನಾಳೆ(ಏಪ್ರಿಲ್ 09) ರಂಜಾನ್ ಆಚರಿಸಲಾಗುತ್ತದೆ. ಇನ್ನು ಕರಾವಳಿ ಬಿಟ್ಟು ಕರ್ನಾಟಕದ ಎಲ್ಲೆಡೆ ನಾಡಿದ್ದು ಅಂದರೆ ಏಪ್ರಿಲ್ 11ರಂದು ರಂಜಾನ್ ಹಬ್ಬ ಆಚರಣೆ ಮಾಡಲಾಗುತ್ತದೆ.