ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಒಂದು ಡೊಡ್ಡ ಸಮಸ್ಯೆಯಾಗಿದೆ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಈಗ ಆಟೋ (Auto), ಕಾರು (Car) ಹಾಗೂ ಬೈಕ್ಗಳು (Bike) ಒಂದು ಸ್ಥಳದಿಂದ ಇನ್ನೊಂದೆಡೆಗೆ ಹೋಗಲು ಬಹಳ ಸಹಕಾರಿಯಾಗಿದೆ. ಓಲಾ (Ola), ಉಬರ್ನಂತಹ (Uber) ಹಲವು ಅಪ್ಲಿಕೇಶನ್ಗಳು ಆಟೋ, ಕಾರ್ ಅನ್ನು ಬುಕ್ ಮಾಡಲು ತುಂಬಾ ಅನುಕೂಲವಾಗಿದೆ.
ಏರ್ ಟ್ಯಾಕ್ಸಿ ಪ್ರಾರಂಭಿಸಲು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಮುಂದಾಗಿದ್ದಾರೆ. ಬೆಂಗಳೂರು ಜನರ ಅನುಕೂಲಕ್ಕಾಗಿ ಅತೀ ಕಡಿಮೆ ಸಮಯ ಹಾಗೂ ಕಡಿಮೆ ಬೆಲೆಯಲ್ಲಿ ಈ ಸೇವೆ ದೊರೆಯಲಿದೆ.