ನವದೆಹಲಿ: ಎಎಪಿ ಅಧ್ಯಕ್ಷ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸತತ ಐದು ಬಾರಿ ಅಬಕಾರಿ ನೀತಿ ಪ್ರಕರಣದ ತನಿಖೆಯ ಭಾಗವಾಗಿ 5 ಬಾರಿ ಸಮನ್ಸ್ ನೀಡಿದರು ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ಜಾರಿ ನಿರ್ದೇಶನಾಲಯ ನ್ಯಾಯಾಲಯದ ಮೊರೆ ಹೋಗಿದೆ.
ಸಮನ್ಸ್‌ಗೆ ಸಮನ್ಸ್‌ಗೆ ದೆಹಲಿ ಮುಖ್ಯಮಂತ್ರಿ ಸ್ಪಂದಿಸುತ್ತಿಲ್ಲ ಮತ್ತು ವಿಚಾರಣೆಗೆ ಹಾಜರಾಗುತ್ತಿಲ್ಲ ಎಂದು ಇಡಿ ಅರ್ಜಿಯಲ್ಲಿ ತಿಳಿಸಲಾಗಿದೆ. ಇಡಿ ಅರ್ಜಿಯನ್ನು ಮುಂದಿನ ಬುಧವಾರ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ವಿಚಾರಣೆ ನಡೆಸಲಿದೆ ಎಂದು ತಿಳಿದುಬಂದಿದೆ. ಈಗಾಗಲೇ ಇಡಿ ಇದೇ ಪ್ರಕರಣದಲ್ಲಿ ಎಎಪಿಯ ಇಬ್ಬರು ನಾಯಕರನ್ನು ಬಂಧಿಸಿದೆ.
ಮುಖ್ಯಮಂತ್ರಿ ಕೇಜ್ರಿವಾಲ್ ಅವರಿಗೂ ವಿಚಾರಣೆಗ ಹಾಜರಾಗುವಂತೆ ಸಮನ್ಸ್ ನೀಡಿತ್ತು. ಇದೀಗ ಸ್ಪಂದಿಸದ ಕಾರಣ ಶನಿವಾರ ಇಡಿ ಕೊರ್ಟ್ನಲ್ಲಿ ಹೊಸ ದೂರು ನೀಡಿದೆ. ಪಿಎಂಎಲ್ ಸೆಕ್ಸನ್ 63(4) ಹಾಗೂ ಐಪಿಸಿ ಸೆಕ್ಸನ್ 174( ಸಾರ್ವಜನಿಕ ಸೇವಕರ ಮುಂದೆ ಗೈರು) ಅಡಿಯಲ್ಲಿ ದೂರು ದಾಖಲಿಸಲಾಗಿದೆ.