ವಾಷಿಂಗ್ಟನ್ : 2022ರಲ್ಲಿ ರಷ್ಯಾ ಮತ್ತು ಉಕ್ರೇನ್ ಮಧ್ಯೆ ಕದನ ವಿರಾಮ ಏರ್ಪಟ್ಟಿತ್ತು. ರಷ್ಯಾ ಮತ್ತು ಉಕ್ರೇನ್ ನಡುವೆ ಮತ್ತೆ ಯುದ್ಧದ ಕಾರ್ಮೋಡ ಆವರಿಸಿತ್ತು. ಸಾಕಷ್ಟು ಜನರು ಮೃತಪಟ್ಟಿದ್ದರು. ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಕೀವ್ ನಗರದ ಮೇಲೆ ನ್ಯೂಕ್ಲಿಯರ್ ದಾಳಿಗೆ ಮುಂದಾಗಿದ್ದರು.
ಭಾರತ ಸೇರಿದಂತೆ ಇತರೆ ದೇಶಗಳು ಈ ಸಂಭಾವ್ಯ ಪರಮಾಣು ದಾಳಿಯನ್ನು ತಡೆಯಲು ಸಹಾಯ ಮಾಡಿವೆ. ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ಬೆಲೆಕೊಟ್ಟ ಪುಟಿನ್ ಉಕ್ರೇನ್ ಮೇಲಿನ ಪರಮಾಣು ದಾಳಿ ನಿರ್ಧಾರವನ್ನು ಕೈಬಿಟ್ಟಿದ್ದರು ,
ರಷ್ಯಾ ಯುದ್ಧತಂತ್ರದ ಅಥವಾ ಯುದ್ಧಭೂಮಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಬಹುದೆಂದು ಬಿಡೆನ್ ಆಡಳಿತವು ಕಳವಳ ವ್ಯಕ್ತಪಡಿಸಿದೆ. ಇನ್ನು ಇದಕ್ಕೆ ಪ್ರತಿಕ್ರಿಯೆಯಾಗಿ ಅಂತಹ ದಾಳಿಯಿಂದ ರಷ್ಯಾವನ್ನು ತಡೆಯಲು ಭಾರತ ಸೇರಿದಂತೆ ಇತರೆ ದೇಶಗಳ ಸಹಾಯವನ್ನು ಯುಎಸ್ ಕೋರಿತು.