ಮುಂಬೈ: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ (Cyber Fraud) ಪ್ರಕರಣಗಳು ಅನೇಕರು ಲಕ್ಷ, ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಅದೇ ರೀತಿ ಆನ್ಲೈನ್ ಫ್ರಾಡ್ನಲ್ಲಿ (Online Fraud) ಮುಂಬೈನ (Mumbai) ಯುವಕನೊಬ್ಬ ಸೈಬರ್ ವಂಚನೆಯಿಂದ 2 ಲಕ್ಷ ಕಳೆದುಕೊಂಡಿದ್ದು, ಭಯದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಮುಂಬೈನ ನಲಸೋಪಾರಾದಲ್ಲಿ ವಾಸಿಸುತ್ತಿದ್ದ 18 ವರ್ಷದ ಬಾಲಕ ಮೊಬೈಲ್ಗೆ ಬಂದ ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಂಡಿದ್ದು, ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಘಟನೆ ಬುಧವಾರ ಮುಂಬೈನಲ್ಲಿ ನಡೆದಿದೆ. 18 ವರ್ಷದ ಯುವಕನೊಬ್ಬ ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದು, ಈ ವೇಳೆ ಆನ್ಲೈನ್ನಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿ 2 ಲಕ್ಷ ರೂಪಾಯಿ ವಂಚನೆಗೆ ಬಲಿಯಾಗಿದ್ದಾನೆ. ಅಮ್ಮನ ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದ. ಆಟ ಆಡುತ್ತಿರುವಾಗ ಒಂದು SMS ಬಂದಿದೆ. ಸಂದೇಶದಲ್ಲಿ ನೀಡಲಾದ ಲಿಂಕ್ ಅನ್ನು ಕ್ಲಿಕ್ ಮಾಡಿದ ಅವರು ಕೆಲವೇ ನಿಮಿಷಗಳಲ್ಲಿ ಮತ್ತೊಂದು ಸಂದೇಶ ಬಂದಿದ್ದು, ಅದರಲ್ಲಿ 2 ಲಕ್ಷ ರೂ. ಸೈಬರ್ ವಂಚನೆಗೆ ಬಲಿಯಾಗಿರುವುದು ಗೊತ್ತಾಗಿದೆ.