ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾದ ಬಳಿಕ ಮೊದಲ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮ ನೀಡಿದರು. ಫೆಬ್ರುವರಿ ಕೊನೆಯ ವಾರದಲ್ಲಿ 110ನೇ ಮನ್ ಕೀ ಬಾತ್ ನೀಡಿದ್ದರು.
ಅಮ್ಮನ ಹೆಸರಿನಲ್ಲಿ ಗಿಡ ನೆಡುವ ಅಭಿಯಾನಕ್ಕೆ ಕರೆ ನೀಡಿದರು.
ಪ್ರತಿಯೊಬ್ಬರಿಗೂ ಅಮ್ಮನ ಪ್ರೀತಿ ಬಹಳ ಮುಖ್ಯ. ಅಮ್ಮನ ಈ ಋಣವನ್ನು ಯಾವತ್ತೂ ತೀರಿಸಲು ಸಾಧ್ಯವಿಲ್ಲ. ಏಕ್ ಪೇಡ್, ಮಾ ಕೆ ನಾಮ್ (ಅಮ್ಮನ ಹೆಸರಲ್ಲಿ ಒಂದು ಮರ) ಕೆಂಪೇನ್ ಇದು ಎಂದು ಮೋದಿ ಹೇಳಿದರು