ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ನೇರ ನಿರ್ದೇಶನದಂತೆ ವೆನೆಜುವೆಲಾ (Venezuela) ದೇಶದ ಮೇಲೆ ಅತಿ ದೊಡ್ಡ ಮಿಲಿಟರಿ (Military) ಆಪರೇಷನ್ ಅಬ್ಸಲ್ಯೂಟ್ ರಿಸಾಲ್ವ್’ ಕಾರ್ಯಾಚರಣೆ ನಡೆದಿದೆ. ಇದು ಕಳೆದ ಆಗಸ್ಟ್ ತಿಂಗಳಿನಿಂದ ನಡೆದ ಗುಪ್ತಚರ ಇಲಾಖೆಯ ತಯಾರಿಯ ಫಲವಾಗಿದೆ.
ಇದು ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮದುರೊ (Nicolas Maduro) ಅವರ ಬಂಧನದೊಂದಿಗೆ ಕೊನೆಗೊಂಡಿದೆ. ಮದುರೊ ಈಗ ಅಮೆರಿಕದ ವಶದಲ್ಲಿದ್ದಾರೆ. ಈ ಕಾರ್ಯಾಚರಣೆಯು ಲ್ಯಾಟಿನ್ ಅಮೆರಿಕಾದಲ್ಲಿ ಅಮೆರಿಕ ನಡೆಸಿದ ಅತಿದೊಡ್ಡ ಮಿಲಿಟರಿ ಹಸ್ತಕ್ಷೇಪ ಎಂದು ಗುರುತಿಸಲ್ಪಟ್ಟಿದೆ.
ಟ್ರಂಪ್ ನೀಡಿದ “ಗುಡ್ ಲಕ್ ಮತ್ತು ಗಾಡ್‌ಸ್ಪೀಡ್” ಎಂಬ ಒಂದು ಸಣ್ಣ ಆದೇಶವು ಜಗತ್ತಿನ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
