ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಅವರ ಅಂತಿಮ ದರ್ಶನಕ್ಕೆ ಬೆಂಗಳೂರಿನ ಬನಶಂಕರಿಯಲ್ಲಿರುವ ಅಪರ್ಣಾ ನಿವಾಸದ ಬಳಿ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ವರೆಗೂ ಆಪ್ತರಿಗೆ, ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಅಂತಿಮ ದರ್ಶನ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಆ ಬಳಿಕ ಅಂತ್ಯಸಂಸ್ಕಾರ ನೆರವೇರಲಿದೆ.
ನಿರೂಪಕಿ ಅಪರ್ಣಾ ನಿವಾಸದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಿನಿಮಾ ರಂಗದ ಹಲವು ಗಣ್ಯರು ಅವರ ಅಂತಿಮ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ. ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್, ಗಾಯಲಿ ಅರ್ಚನಾ ಉಡುಪ, ಬಿ.ಆರ್.ಛಾಯಾ ಸೇರಿದಂತೆ ಅನೇಕರು ಆಗಮಿಸಿ ಅಪರ್ಣಾ ಅಂತಿಮ ದರ್ಶನ ಪಡೆದಿದ್ದಾರೆ.
ಅಂತಿಮ ದರ್ಶನ ಪಡೆದುಕೊಂಡು ಮಾತನಾಡಿದ ಹಿರಿಯ ನಟ ದತ್ತಣ್ಣ ಅವರು, ಸಾವಿನ ಮುನ್ಸೂಚನೆ ಗೊತ್ತಿದ್ದರು ನಗುತ್ತಾ ಇದ್ದ ನಟಿ ಅಪರ್ಣಾ ಅವರು, ಅವರ ಸಾವಿನ ಸುದ್ದಿ ಕೇಳಿ ಬೇಸರವಾಯಿತು. ಕುಟುಂಬಸ್ಥರಿಗೆ ಈ ನೋವು ಭರಿಸುವ ಶಕ್ತಿಕೊಡಲಿ ಎಂದು ಹೇಳಿದ್ದಾರೆ.