ಮುಂಬೈ: ಅಂಬಾನಿ ದಂಪತಿ ಕಿರಿಯ ಪುತ್ರ ಹಾಗೂ ಖ್ಯಾತ ಯುವ ಉದ್ಯಮಿ ಅನಂತ್ ಅಂಬಾನಿ (Anant Ambani) ವಿವಾಹಕ್ಕೆ ದಿನಗಣನೆ ಶುರುವಾಗಿದೆ. ಅನಂತ್ ಅಂಬಾನಿ ಅವರು ರಾಧಿಕಾ ಮರ್ಚೆಂಟ್ (Radhika Merchant) ಅವರನ್ನು ವಿವಾಹವಾಗಲಿದ್ದಾರೆ.
ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ದಂಪತಿ ಬಡ ವಧು ವರರಿಗಾಗಿ ಉಚಿತ ಸಾಮೂಹಿಕ ವಿವಾಹ (mass weddings) ಹಮ್ಮಿಕೊಂಡಿದ್ದರು. ಮಗನ ವಿವಾಹಕ್ಕೂ ಮುನ್ನ ಬಡ ಕುಟುಂಬದ 50 ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಿದ್ದರು. ಮಹಾರಾಷ್ಟ್ರದ ಪಾಲ್ಗರ್‌ನಲ್ಲಿ ಇಂದು 50 ಬಡ ವಧು ವರರಿಗಾಗಿ ಅದ್ಧೂರಿ ಉಚಿತ ಸಾಮೂಹಿಕ ವಿವಾಹ ನೆರವೇರಿತು.