ನವದೆಹಲಿ : ಮಾರುಕಟ್ಟೆಯಲ್ಲಿ ಗ್ಯಾಸ್ ಅಭಾವ ಸೃಷ್ಟಿಯಾಗಿದೆ ಎಂಬ ವದಂತಿ. ದೇಶದಲ್ಲಿ ಎಲ್ಪಿಜಿ ಸಿಲಿಂಡರ್ಗಳ ಯಾವುದೇ ಕೊರತೆಯಿಲ್ಲ ಎಂದು ಕೇಂದ್ರ ಸರ್ಕಾರ ಈಗ ಅಧಿಕೃತವಾಗಿ ಸ್ಪಷ್ಟಪಡಿಸಿದೆ. ಭಾರತ ಸರ್ಕಾರ ದೇಶದ ಜನತೆಗೆ ದೊಡ್ಡ ಭರವಸೆಯೊಂದನ್ನು ನೀಡಿದೆ.
ಪ್ರತಿದಿನದಂತೆಯೇ ಈಗಲೂ 50 ಲಕ್ಷಕ್ಕೂ ಹೆಚ್ಚು ಸಿಲಿಂಡರ್ಗಳು ಮನೆಮನೆಗೆ ತಲುಪುತ್ತಿವೆ. ಹೆಚ್ಚಾದ ಬುಕಿಂಗ್ಗಳಿಂದಾಗಿ ವಿತರಣೆಯಲ್ಲಿ ಸಣ್ಣಮಟ್ಟದ ವ್ಯತ್ಯಯ ಉಂಟಾಗಿದೆಯೇ ಹೊರತು, ಸ್ಟಾಕ್ ಖಾಲಿಯಾಗಿಲ್ಲ ಎಂದು ಸರ್ಕಾರ ಹೇಳಿದೆ. ಆ ಕುರಿತ ವರದಿ ಇಲ್ಲಿದೆ.
ಇಂಧನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಸರ್ಕಾರ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಪೆಟ್ರೋಲಿಯಂ ಸರಬರಾಜು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಸ್ಪಷ್ಟಪಡಿಸಿದೆ.
