ಪೋರ್ಟ್ಲ್ಯಾಂಡ್ : ಅಲಾಸ್ಕಾ ಏರ್ಲೈನ್ಸ್ನ ಬೋಯಿಂಗ್ 737-9 ಮ್ಯಾಕ್ಸ್ ವಿಮಾನವು ಇಂದು ತುರ್ತು ಪರಿಸ್ಥಿತಿಯನ್ನು ಎದುರಿಸಿತು, ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅದರ ಒಂದು ಬಾಗಿಲು ಗಾಳಿಯಲ್ಲಿ ಹಾರಿಹೋಯಿತು.
“ಈ ಸಂಜೆ AS1282 ರ ಪೋರ್ಟ್ಲ್ಯಾಂಡ್ನಿಂದ ಒಂಟಾರಿಯೊ, CA (ಕ್ಯಾಲಿಫೋರ್ನಿಯಾ) ಗೆ ನಿರ್ಗಮಿಸಿದ ಸ್ವಲ್ಪ ಸಮಯದ ನಂತರ ಘಟನೆ ಸಂಭವಿಸಿದೆ” ಎಂದು ಅಲಾಸ್ಕಾ ಏರ್ಲೈನ್ಸ್ ತನ್ನ ಸೋಶಿಯಲ್ ಮೀಡಿಯಾ ಪೋಸ್ಟ್ನಲ್ಲಿ ತಿಳಿಸಿದೆ.
ವಿಮಾನವು 171 ಪ್ರಯಾಣಿಕರು ಮತ್ತು 6 ಸಿಬ್ಬಂದಿಗಳೊಂದಿಗೆ ಪೋರ್ಟ್ಲ್ಯಾಂಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ಏನಾಯಿತು ಎಂದು ನಾವು ತನಿಖೆ ನಡೆಸುತ್ತಿದ್ದೇವೆ ಮತ್ತು ಅದು ತಿಳಿದ ತಕ್ಷಣ ನಿಮ್ಮೊಂದಿಗೆ ವಿವರಗಳನ್ನು ಹಂಚಿಕೊಳ್ಳುತ್ತೇವೆ ಎಂದೂ ತಿಳಿಸಿದೆ.