ರಾಯಚೂರು: ಲಂಚ (Bribe) ಸ್ವೀಕರಿಸುವಾಗ ಜೆಸ್ಕಾಂ (GESCOM) AEE ಲೋಕಾಯುಕ್ತ (Karnataka Lokayukta) ಬಲೆಗೆ ಬಿದ್ದಿರುವ ಘಟನೆ ರಾಯಚೂರು (Raichuru) ಜಿಲ್ಲೆಯ ಲಿಂಗಸ್ಗೂರಿನಲ್ಲಿ ನಡೆದಿದೆ.
ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಜೆಸ್ಕಾಂ AEE ಕೆಂಚಪ್ಪ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೆಸ್ಕಾಂ ಕಚೇರಿಯಲ್ಲಿಯೇ (GESCOM Office) ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ಆರೋಪಿಯನ್ನು (Accused) ಟ್ರ್ಯಾಪ್ ಮಾಡಿದ್ದಾರೆ.
ಬಂಧಿತ ಅಧಿಕಾರಿ ಜೆಸ್ಕಾಂ ಗುತ್ತಿಗೆದಾರ ನಾಯಕ್ಎಂಬುವವರ ಬಳಿ 10,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ. ಇದರಂತೆ ಇಂದು 5000 ರೂಪಾಯಿ ಹಣ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಐದು ಸಾವಿರ ನಗದು ರೂಪದಲ್ಲಿ ಲಂಚದ ಹಣ ಸ್ವೀಕರಿಸುವ ಮುನ್ನ ಆರೋಪಿ ಕೆಂಚಪ್ಪ 5 ಸಾವಿರ ರೂಪಾಯಿಗಳನ್ನು ಫೋನ್ ಪೇ ಮೂಲಕ ಪಡೆದುಕೊಂಡಿದ್ದರಂತೆ. ಸದ್ಯ ಅಧಿಕಾರಿಯನ್ನು ವಶಕ್ಕೆ ಪಡೆದುಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು ಲಿಂಗಸ್ಗೂರಿನ ಜೆಸ್ಕಾಂ ಕಚೇರಿಯಲ್ಲಿ ತನಿಖೆ ಮುಂದುವರಿಸಿದ್ದಾರೆ.