ಅಮೆರಿಕ : ಇರಾನ್ ನೌಕಾಪಡೆಯ ನಾವಿಕರ ಮೃತದೇಹಗಳನ್ನು ಹಸ್ತಾಂತರಿಸುವ ವಿಚಾರದಲ್ಲಿ ಅಮೆರಿಕದ (America) ಬೆದರಿಕೆ ನಯವಾಗಿಯೇ ತಳ್ಳಿಹಾಕಿರುವ ಲಂಕಾ ಸರ್ಕಾರ, ಮಾನವೀಯತೆ ಮತ್ತು ತನ್ನ ಸ್ವತಂತ್ರ ವಿದೇಶಾಂಗ ನೀತಿಯೇ ಮುಖ್ಯ ಎಂದು ಸಾರಿದೆ.
ಲಂಕಾದ ಈ ದಿಟ್ಟ ನಿರ್ಧಾರಕ್ಕೆ ಇರಾನ್ (Iran) ಕೃತಜ್ಞತೆ ಸಲ್ಲಿಸಿದ್ದು, ಸೂಪರ್ ಪವರ್ ರಾಷ್ಟ್ರದ (Super Power Country) ಕೆಂಗಣ್ಣಿನ ನಡುವೆಯೂ ಇಂದು ಮೃತದೇಹಗಳ ರವಾನೆಗೆ ಕ್ಷಣಗಣನೆ ಆರಂಭವಾಗಿದೆ.
