ಬೆಂಗಳೂರಿನಲ್ಲಿ ಚಾಲಕ ರಹಿತ ಮೆಟ್ರೋ ರೈಲು ಆರಂಭವಾಗುತ್ತಿದೆ. ನಮ್ಮ ಮೆಟ್ರೋ ಹಳದಿ ಕಾರಿಡಾರ್ ಹೊಸ ಮೈಲಿಗಲ್ಲು ಸೃಷ್ಟಿಸಲು ಸಿದ್ಧವಾಗಿದೆ. ಚೀನಾದಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಗೆ ಮೊದಲ ಚಾಲಕ ರಹಿತ ರೈಲು ಹೊರಟಿದೆ. ಆ ರೈಲು ಚೆನ್ನೈ ತಲುಪಿದೆ.
ಚೆನ್ನೈ ಬಂದರಿಗೆ ಮಾದರಿ ರೈಲು ಆಗಮನವನ್ನು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಕಸ್ಟಮ್ಸ್ ಕ್ಲಿಯರೆನ್ಸ್ ನಂತರ ಅದನ್ನು ರಸ್ತೆ ಮೂಲಕ ಬೆಂಗಳೂರಿಗೆ ಸಾಗಿಸಲಾಗುತ್ತದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಅಧಿಕಾರಿಗಳು ಎಲೆಕ್ಟ್ರಾನಿಕ್ಸ್ ಸಿಟಿ ಮೆಟ್ರೋಗೆ ಮೊದಲ ಆರು ಬೋಗಿಗಳ ರೈಲನ್ನು ಜನವರಿ 20 ರಂದು ಹಡಗಿಗೆ ಲೋಡ್ ಮಾಡಿದ್ದರು.