ಬೆಂಗಳೂರು : ಗರದ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ ಬಗೆದಷ್ಟು ಆಳ-ಅಗಲಕ್ಕೆ ವಿಸ್ತರಿಸಿಕೊಳ್ಳುತ್ತಿದೆ. ಈಗಾಗಲೇ ಬಳ್ಳಾರಿಯಲ್ಲಿ ಎನ್ಐಎ ಅಧಿಕಾರಿಗಳ ತಂಡ ಬೀಡುಬಿಟ್ಟು ಬಾಂಬರ್‌ನ ಚಲನವಲನ ಪತ್ತೆ ಹಚ್ಚುತ್ತಿದೆ. ಇವೆಲ್ಲದರ ಮಧ್ಯೆ ಇಂದು ನಗರದ ಕುಂದಲಹಳ್ಳಿ ಬಳಿಯಿರುವ ರಾಮೇಶ್ವರಂ ಕೆಫೆ ಪುನಾರಂಭವಾಗಿದೆ.
ರಾಮೇಶ್ವರಂ ಕೆಫೆ ಮಾಲೀಕರಾದ ದಿವ್ಯಾ, ರಾಘವೇಂದ್ರ ರಾವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಭಾರತೀಯರ ಆತ್ಮಸ್ಥೈರ್ಯವನ್ನು ಈ ಘಟನೆ ಕುಗ್ಗಿಸಿಲ್ಲ. ನಿಮ್ಮೆಲ್ಲರ ಸಹಕಾರದಿಂದ ಇಂದು ರಾಮೇಶ್ವರಂ ಕೆಫೆ ಪುನರ್ ಆರಂಭವಾಗುತ್ತಿರುವುದು ಇದಕ್ಕೆ ಸಾಕ್ಷಿ. ಇದು ನಿಜವಾದ ಭಾರತೀಯರ ಶಕ್ತಿ ಎಂದು ಹೇಳಿದ್ದಾರೆ.