ಮನಾಮ : ಪ್ರವಾಸೋದ್ಯಮ ಸಚಿವರಾದ HE ಫಾತಿಮಾ ಬಿಂತ್ ಜಾಫರ್ ಅಲ್ ಸೈರಾಫಿ ಅವರು “ಮನಾಮ ದಿ ಕ್ಯಾಪಿಟಲ್ ಓಫ್ ಗಲ್ಫ್ ಟೂರಿಸಂ 2024” ಗುರುತನ್ನು 17 ಮಾರ್ಚ್ ರಂದು ಬಹರೇನ್ ನ್ಯಾಷನಲ್ ಥೀಯೇಟರ್ ನಲ್ಲಿ ಅನಾವರಣಗೊಳಿಸಿದರು.
ಈ ಕಾರ್ಯಕ್ರಮವು ಪ್ರವಾಸೋದ್ಯಮ ಮತ್ತು ಮನರಂಜನಾ ಕಾರ್ಯಕ್ರಮಗಳ ವೈವಿಧ್ಯಮಯ ಶ್ರೇಣಿಯನ್ನು, ಕೊಡುಗೆಗಳನ್ನುಒಳಗೊಂಡಿವೆ.
ಪ್ರವಾಸೋದ್ಯಮ ಸಚಿವಾಲಯ, ಬಹ್ರೇನ್ ಪ್ರವಾಸೋದ್ಯಮ ಮತ್ತು ಪ್ರದರ್ಶನಗಳ ಪ್ರಾಧಿಕಾರ (BTEA) ಸಹಯೋಗದೊಂದಿಗೆ ಈ ಕಾರ್ರ್ಯಕ್ರಮವನ್ನು ಆಯೋಜಿಸಿದೆ.
ಗಲ್ಫ್ ದೇಶಗಳ ನಾಗರಿಕರು ಮತ್ತು ನಿವಾಸಿಗಳಿಗೆ ಅನುಗುಣವಾಗಿ ವಿಶೇಷ ಪ್ರವಾಸೋದ್ಯಮ ಪ್ಯಾಕೇಜ್‌ಗಳನ್ನು ಪರಿಚಯಿಸಲು, ವಿವಿಧ ರೀತಿಯಲ್ಲಿ ಹೆಚ್ಚಿನ ಸಂಖ್ಯೆಯ ಸಂದರ್ಶಕರನ್ನು ಆಕರ್ಷಿಸುವ ಗುರಿಯನ್ನು ಹೊಂದಿರುವ ಪ್ರಯತ್ನವನ್ನು ಸಚಿವರು ಒತ್ತಿ ಹೇಳಿದರು.
ಉದ್ಘಾಟನೆಯು ಬಹ್ರೇನ್ ನ್ಯಾಷನಲ್ ಥಿಯೇಟರ್‌ನಲ್ಲಿ ನಡೆಯಿತು. ಗಣ್ಯರು, ಬಹ್ರೇನ್ ಪ್ರವಾಸೋದ್ಯಮ ಮತ್ತು ಪ್ರದರ್ಶನಗಳ ಪ್ರಾಧಿಕಾರದ ನಿರ್ದೇಶಕರ ಮಂಡಳಿಯ ಸದಸ್ಯರು ಮತ್ತು ಸಂಸ್ಕೃತಿ ಮತ್ತು ಪ್ರಾಚೀನ ವಸ್ತುಗಳ ಬಹ್ರೇನ್ ಪ್ರಾಧಿಕಾರದ ಪ್ರತಿನಿಧಿಗಳು ಭಾಗವಹಿಸಿದ್ದರು.