ಇಸ್ಲಾಮಾಬಾದ್: ಅಂತರರಾಷ್ಟ್ರೀಯ ಹಣಕಾಸು ನಿಧಿಯು ಪಾಕಿಸ್ತಾನಕ್ಕೆ ತಕ್ಷಣವೇ 1 ಬಿಲಿಯನ್ ಡಾಲರ್ ಅಂದರೆ 8,400 ಕೋಟಿ ಹಣ ಕೊಡಲು ಅನುಮತಿ ನೀಡಿದೆ.
ಭಾರತವು ಪಾಕಿಸ್ತಾನ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆಗೆ IMF ಸಾಲದ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯ ಬಗ್ಗೆಯೂ ಆತಂಕ ವ್ಯಕ್ತಪಡಿಸಿತ್ತು.
ಅಂತರರಾಷ್ಟ್ರೀಯ ಹಣಕಾಸು ನಿಧಿಯು ಪಾಕಿಸ್ತಾನದ ವಿಸ್ತೃತ ನಿಧಿ ಸೌಲಭ್ಯಯ ಎರಡನೇ ಕಂತಿನ 1 ಬಿಲಿಯನ್ ಡಾಲರ್ ಅಂದರೆ 8,400 ಕೋಟಿ ಹಣದೊಂದಿಗೆ ಹೊಸದಾಗಿ 1.3 ಬಿಲಿಯನ್ ಡಾಲರ್ ಅಂದರೆ 11,300 ಕೋಟಿ ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರತೆ ಸೌಲಭ್ಯ ಹಣದ ಬಿಡುಗಡೆಗೂ ಅನುಮೋದನೆ ನೀಡಿದೆ. ಒಟ್ಟು 20 ಸಾವಿರ ಕೋಟಿ ಹಣವನ್ನು ಸಾಲವಾಗಿ ನೀಡಲು ಒಪ್ಪಿಕೊಂಡಿದೆ.
ಏತನ್ಮಧ್ಯೆ, ಪಾಕಿಸ್ತಾನವು ಐಎಂಎಫ್‌ನಿಂದ ದೀರ್ಘಕಾಲದ ಸಾಲಗಾರನಾಗಿದ್ದು, ಅಭಿವೃದ್ಧಿಯ ಯೋಜನೆಗಳ ಅನುಷ್ಠಾನ ಮತ್ತು ಐಎಂಎಫ್‌ನ ಕಾರ್ಯಕ್ರಮದ ಷರತ್ತುಗಳನ್ನು ಪಾಲಿಸುವಲ್ಲಿ ಅತ್ಯಂತ ಕಳಪೆ ದಾಖಲೆಯನ್ನು ಹೊಂದಿದೆ ಎಂದು ಭಾರತ ಹೇಳಿತ್ತು.