ಬೆಂಗಳೂರು : ಏರ್ ಇಂಡಿಯಾ ವಿಮಾನವೊಂದರಲ್ಲಿ (Air India Flight) ಅಗ್ನಿ ಅವಘಡ ಸಂಭವಿಸಿರುವ ವರದಿಯಾಗಿದೆ. ಇಂದು (ಮೇ 17) ಸಂಜೆ 6 ಗಂಟೆ ಸುಮಾರಿಗೆ ನವದೆಹಲಿಯಿಂದ (New Delhi) ಬೆಂಗಳೂರಿಗೆ(Bengaluru) ಬರುತ್ತಿದ್ದ ಏರ್ ಇಂಡಿಯಾ ವಿಮಾನದ ಬೆಂಕಿ(Fire) ಕಾಣಿಸಿಕೊಂಡಿದೆ.
ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 175 ಪ್ರಯಾಣಿಕರಿದ್ದ ವಿಮಾನ ಟೇಕ್ ಆಫ್ ಆಗುವ ವೇಳೆ ಹವಾನಿಯಂತ್ರಣ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಅಲರ್ಟ್ ಮಾಡಿದ್ದು, ಕೂಡಲೇ ಪೈಲೆಟ್ ವಿಮಾನವನ್ನು ದೆಹಲಿ ನಿಲ್ದಾಣದಲ್ಲೇ ಲ್ಯಾಂಡಿಂಗ್ ಮಾಡಿದ್ದಾರೆ. ಇದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.