ಹೈದರಾಬಾದ್: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ವೈಎಸ್ಆರ್ಪಿ ನಾಯಕ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರಿಗೆ ಸಂಬಂಧಿಸಿದ ಡಾಲ್ಮಿಯಾ ಸಿಮೆಂಟ್ಸ್ (ಭಾರತ್) ಲಿಮಿಟೆಡ್ ಕಂಪನಿಯ 800 ಕೋಟಿ ಮೌಲ್ಯದ ಷೇರುಗಳನ್ನು ವಶಕ್ಕೆ ಪಡೆದಿದೆ.
ಜಗನ್ ಮೋಹನ್ ರೆಡ್ಡಿ ಅವರ ಕುಟುಂಬಕ್ಕೆ ಸಂಬಂಧಿಸಿದ ರಘುರಾಮ್ ಸಿಮೆಂಟ್ಸ್ ಲಿಮಿಟೆಡ್ನಲ್ಲಿ (ಈಗ ಭಾರತಿ ಸಿಮೆಂಟ್ಸ್) 95 ಕೋಟಿ ರೂ. ಹೂಡಿಕೆ ಮಾಡಿತ್ತು. ಆ ಕಾರಣದಿಂದ ಈ ವ್ಯವಹಾರವು ಕ್ವಿಡ್ ಪ್ರೊ ಕ್ವೋ (ಪರಸ್ಪರ ಲಾಭದ ಒಪ್ಪಂದ) ಆಧಾರಿತವಾಗಿದೆ ಎಂದು ಆರೋಪಿಸಲಾಗಿದೆ.
2011ರಲ್ಲಿ ಕೇಂದ್ರ ತನಿಖಾ ದಳ (CBI) ದಾಖಲಿಸಿದ ಎಫ್ಐಆರ್ ಆಧಾರಿತವಾಗಿದ್ದು, ಇಡಿಯ ಮಧ್ಯಂತರ ಮುಟ್ಟುಗೋಲು ಆದೇಶವನ್ನು ಮಾರ್ಚ್ 31, 2025ರಂದು ಹೊರಡಿಸಲಾಗಿದ್ದು, DCBL ಇದನ್ನು ಏಪ್ರಿಲ್ 15, 2025ರಂದು ಸ್ವೀಕರಿಸಿದೆ.