ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧಕ್ಕೆ ಅಂತ್ಯ ಹಾಡುವ ದೃಷ್ಟಿಯಿಂದ ಉಕ್ರೇನ್ ಹಮ್ಮಿಕೊಂಡಿರುವ ಶಾಂತಿ ಶೃಂಗಸಭೆಯಲ್ಲಿ ಭಾರತ ಪಾಲ್ಗೊಳ್ಳುತ್ತಿದೆ. ಎರಡು ದಿನಗಳ ಕಾಲ ಸಭೆ ನಡೆಯಲಿದ್ದು, ರಷ್ಯಾಗೆ ಆಹ್ವಾನ ನೀಡಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಪಾಕಿಸ್ತಾನ, ಚೀನಾ ಸೇರಿ ಹಲವು ರಾಷ್ಟ್ರಗಳು ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿವೆ.
2 ದಿನಗಳ ಸುದೀರ್ಘ ಶೃಂಗಸಭೆಯು ಯುದ್ಧವನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಯೋಜನೆಗೊಂಡ ನಾಲ್ಕನೇ ಶೃಂಗಸಭೆಯಾಗಿದೆ. ಈ ಹಿಂದೆ ಕೋಪನ್ ಹ್ಯಾಗನ್, ಜೆಡ್ಡಾ ಮತ್ತು ಮಾಲ್ಟಾದಲ್ಲಿ ಮೂರು ಶೃಂಗಸಭೆಗಳು ನಡೆದಿವೆ. ಸ್ವಿಸ್ ಅಧಿಕಾರಿಗಳು ಸಮ್ಮೇಳನಕ್ಕೆ 160 ದೇಶಗಳನ್ನು ಆಹ್ವಾನಿಸಿದ್ದಾರೆ. ಇದರಲ್ಲಿ ಭಾರತ ಸೇರಿದಂತೆ ಸುಮಾರು 90 ದೇಶಗಳ ನಾಯಕರು ಅಥವಾ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಆದಾಗ್ಯೂ, ಅನೇಕ ಪ್ರಮುಖ ದೇಶಗಳು ಭಾಗವಹಿಸಲು ನಿರಾಕರಿಸಿದವು.