ಸೋಮವಾರ ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಯಶಸ್ವಿಯಾಗಿ ನೆರೆವೇರಿದೆ. ಪ್ರಧಾನಿ ಮೋದಿಯವರೇ ಸ್ವತಃ ಈ ಕಾರ್ಯವನ್ನು ನೆರೆವೇರಿಸಿದ್ದಾರೆ.
ಮೋದಿ ರಾಮಮಂದಿರಕ್ಕೆ ಬಂದಾಗ ಅವರ ಕೈಯಲ್ಲಿ ವಿಶೇಷ ಬೆಳ್ಳಿಯ ಛತ್ರಿ ಗಮನ ಸೆಳೆದಿತ್ತು. ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ತಟ್ಟೆಯಲ್ಲಿ ಕೆಂಪು ವಸ್ತ್ರದ ಜೊತೆಗೆ ಬೆಳ್ಳಿ ಛತ್ರಿಯನ್ನ ತಂದಿದ್ದರು.
ಈ ಛತ್ರಿಯು ಹಿಂದೂ ಧರ್ಮದಲ್ಲಿ ದೇವರು ಮತ್ತು ದೇವತೆಗಳ ದೈವಿಕ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಪ್ರತಿ ದೇವಸ್ಥಾನದಲ್ಲಿ ಶ್ರೀರಾಮನ ವಿಗ್ರಹದ ಮೇಲೆ ಹಾಕಲಾದ ಛತ್ರಿಯು ಅವನ ಮಹಿಮೆಯನ್ನು ತೋರಿಸುತ್ತ
ಈ ಬೆಳ್ಳಿಯ ಛತ್ರಿಯು ರಾಮನ ರಘು ವಂಶವನ್ನೂ ಪ್ರತಿನಿಧಿಸುತ್ತದೆ. ರಾಮಲಾಲಾ ಪ್ರತಿಮೆಯ ಮೇಲಿನ ಬೆಳ್ಳಿಯ ಛತ್ರಿಯು ಅವನ ತೇಜಸ್ಸು ಮತ್ತು ವೈಭವವನ್ನು ಪ್ರತಿನಿಧಿಸುತ್ತದೆ.