ದೆಹಲಿ: ಕೇಂದ್ರ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಮತ್ತು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ ಹೊರಡಿಸಿರುವ ಹೊಸ ಕಟ್ಟುನಿಟ್ಟಾದ ಮಾರ್ಗಸೂಚಿಗಳ ಪ್ರಕಾರ, ವಿಮಾನ ನಿಲ್ದಾಣದಲ್ಲಿ ಅನಧಿಕೃತವಾಗಿ ಚಿತ್ರೀಕರಣ ಮಾಡಿದರೆ ಭಾರೀ ಪರಿಣಾಮಗಳನ್ನ ಎದರಿಸಬೇಕಾಗಬಹುದು.
ವಿಮಾನ ನಿಲ್ದಾಣಗಳ ಹಲವಾರು ನಿರ್ಬಂಧಿತ ಪ್ರದೇಶಗಳಲ್ಲಿ ಪೂರ್ವಾನುಮತಿ ಇಲ್ಲದೆ ಪ್ರಯಾಣಿಕರು ಮತ್ತು ಸಂದರ್ಶಕರು ಫೋಟೋ ಅಥವಾ ವೀಡಿಯೊಗಳನ್ನು ತೆಗೆದುಕೊಳ್ಳುವುದನ್ನು ನಿಷೇಧಿಸಿದೆ
ವಿಮಾನ ನಿಲ್ದಾಣದ ಈ ಸ್ಥಳಗಳಲ್ಲಿ ವೀಡಿಯೊ ರೆಕರ್ಡ್ ಮಾಡಿದರೆ ಅದನ್ನ ಅಳಿಸಲಾಗುವುದು , ದಂಡ ವಿಧಿಸಲಾಗುವುದು ಹಾಗೂ ಮೊಬಲೈ ಫೋನ್ ಅನ್ನು ವಶಕ್ಕೆ ಪಡೆಯಲಾಗುವುದು , ವಿಮಾನ ಹಾರಟದ ನೋ-ಫ್ಲೈ ಲೀಸ್ಟ್ಗೆ ಸೇರಿಸಬಹುದು ಎನ್ನಲಾಗಿದೆ
