ತಿರುವನಂತಪುರ : ಕೇರಳ ಉಚ್ಛ ನ್ಯಾಯಾಲಯವು ಮಂಗಳವಾರ ಮಲಯಾಳಂ ನಟ ಸಿದ್ದೀಕ್ ರವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ನಿರೀಕ್ಷಣಾ ಜಾಮೀನು ನಿರಾಕರಣೆಯ ಬಳಿಕ ಸಿದ್ದೀಕ್ ತಲೆಮರೆಸಿಕೊಂಡಿದ್ದಾರೆ. ಆದರೆ ಪೋಲಿಸರು ಅವರನ್ನು ಬಂಡಿಸಲಾಗಿಲ್ಲ. ಕೇರಳ ಉಚ್ಛ ನ್ಯಾಯಾಲಯವು ಮಂಗಳವಾರ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಕೇರಳ ಪೋಲಿಸರು ಅವರ ವಿರುದ್ಧ ಲುಕ್ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ.