ಕಾರವಾರ : ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ATS) ಕಳೆದ ಎರಡು ದಿನಗಳ ಹಿಂದೆ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಐಸಿಸ್ (ISIS) ಸಂಘಟನೆಗೆ ಹಣ ವರ್ಗಾವಣೆ ಮಾಡುತ್ತಿದ್ದ ಇಂಜಿನಿಯರ್ ಹುಸೇನ್ ಅಬ್ದುಲ್ ಅಜೀಜ್ ಶೇಖ್ (32) ಎಂಬಾತನನ್ನು ನಾಸಿಕ್ನ ಟಿಡ್ಕೆ ಕಾಲೋನಿಯಲ್ಲಿ ಬಂಧಿಸಿದ್ದರು.
ಆರೋಪಿ ಹುಸೇನ್ ಅಬ್ದುಲ್ ಅಜೀಜ್ ಶೇಖ್ ಮನೆಯಲ್ಲಿ ಸಿಮ್ ಕಾರ್ಡ್ಸ್, ಮೊಬೈಲ್ ಫೋನ್ಗಳು, ಪೆನ್ಡ್ರೈವ್ಗಳು, ಲ್ಯಾಪ್ಟಾಪ್ ಗಳನ್ನು ತಪಾಸಣೆ ನಡೆಸಿದಾಗ, ಹುಸೇನ್ ಅಬ್ದುಲ್ ಅಜೀಜ್ ಶೇಖ್ ಜೊತೆ ಭಟ್ಕಳದ ಮಹಿಳೆ ಸಂಪರ್ಕವಿರುವುದು ಪತ್ತೆಯಾಗಿದೆ. ಈ ಮಹಿಳೆ ಆರೋಪಿ ಹುಸೇನ್ ಅಬ್ದುಲ್ ಅಜೀಜ್ ಶೇಖ್ನನ್ನು ಪ್ರೀತಿ ಮಾಡುತ್ತಿದ್ದಳು ಎಂಬ ವಿಚಾರವು ತಿಳಿದುಬಂದಿದೆ.
ಈ ಮಹಿಳೆ ಭಟ್ಕಳದಲ್ಲಿ ಆನ್ಲೈನ್ ಅರೇಬಿಕ್ ಕ್ಲಾಸ್ ನಡೆಸುತ್ತಿದ್ದಾಳೆ. ಈಕೆ ಜ.17ರಂದು ಆರೋಪಿ ಹುಸೇನ್ ಅಬ್ದುಲ್ ಅಜೀಜ್ ಶೇಖ್ನನ್ನು ಭಟ್ಕಳದ ಲಾಡ್ಜ್ವೊಂದರಲ್ಲಿ ಭೇಟಿಯಾಗಿದ್ದಳು.
ಆರೋಪಿ ಹುಸೇನ್ ಅಬ್ದುಲ್ ಅಜೀಜ್ ಶೇಖ್ ಜೊತೆ ಮಹಿಳೆ ನಿರಂತರ ಸಂಪರ್ಕದಲ್ಲಿದ್ದಳು, ಈವರೆಗೆ 4-5 ಲಕ್ಷ ರೂ. ನೀಡಿದ್ದಾಳೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಭಟ್ಕಳದ ಮಹಿಳೆಯನ್ನು ತನಿಖೆ ಮಾಡಲಾಗಿದೆ.