Close Menu

    Subscribe to Updates

    Get the latest creative news from FooBar about art, design and business.

    What's Hot

    ಗುಜರಾತ್‌ನಿಂದ ಮುಂಬೈಗೆ ಮೊದಲ ಸ್ವದೇಶಿ ಬುಲೆಟ್ ರೈಲು

    ಭಾರತಿ ಅಸೋಸಿಯೇಷನ್ ​​ವತಿಯಿಂದ ಜಾಗತಿಕ ಸಾಹಸಿ ಡಾ.ಸಿಂಗಾರ ವಡಿವೇಲ್ಅವರನ್ನು ಸನ್ಮಾನಿಸಿಲಾಯಿತು

    ಬಿಜೆಪಿ ಸೇರಿದ ರಾಘವ್ ಚಡ್ಡಾ

    Facebook X (Twitter) Instagram
    Trending
    • ಗುಜರಾತ್‌ನಿಂದ ಮುಂಬೈಗೆ ಮೊದಲ ಸ್ವದೇಶಿ ಬುಲೆಟ್ ರೈಲು
    • ಭಾರತಿ ಅಸೋಸಿಯೇಷನ್ ​​ವತಿಯಿಂದ ಜಾಗತಿಕ ಸಾಹಸಿ ಡಾ.ಸಿಂಗಾರ ವಡಿವೇಲ್ಅವರನ್ನು ಸನ್ಮಾನಿಸಿಲಾಯಿತು
    • ಬಿಜೆಪಿ ಸೇರಿದ ರಾಘವ್ ಚಡ್ಡಾ
    • ತ್ರಿಶೂರ್ ಪೂರಂ ಉತ್ಸವದ ಸಿದ್ಧತೆಯಲ್ಲಿದ್ದಾಗ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ, 13 ಮಂದಿ ಸಾವು
    •  ಸಂಸದರಿಗೆ ಮೋದಿ ಕೊನೇಕ್ಷಣದ ಮನವಿ
    • ಬಹರೇನ್ ನ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನ ಮಂತ್ರಿ ಹಿಸ್ ರಾಯಲ್ ಹೈನೆಸ್ಸ್ ಪ್ರಿನ್ಸ್ ಸಲ್ಮಾನ್ ಬಿನ್ ಹಮದ್ ಅಲ್ ಖಲೀಫಾ ರವರು ಲುಲು ಗ್ರೂಪ್ ಇಂಟರ್ನ್ಯಾಷನಲ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಎಮ್ ಏ ಯೂಸುಫ್ ಆಲಿಯುವರನ್ನು ಭೇಟಿಯಾದರು
    • ಕರ್ನಾಟಕದ ವಾಹನ ಮಾಲೀಕರಿಗೆ ಹೊರ ರಾಜ್ಯದಲ್ಲಿ ಇನ್ಮುಂದೆ ದಂಡ ಕಟ್ಟುವಂತಿಲ್ಲ
    • ಅಮೆರಿಕಾ ಜೊತೆ ಇರಾನ್ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಮಾತುಕತೆ
    Facebook X (Twitter) Instagram YouTube
    Starvision Kannada
    • Home
    • Bahrain
    • Middle East
    • India
    • Karnataka
    • World
    Starvision Kannada
    You are at:Home » ಮಾಲ್ಡೀವ್ಸ್‌ ಬುಕ್ಕಿಂಗ್ ಕ್ಯಾನ್ಸಲ್‌ ಬಳಿಕ ‘ದೇಶ ಮೊದಲು ವ್ಯಾಪಾರ ನಂತರ’ ಎಂಬ ಸಂದೇಶ ಕಳಿಸಿದ Ease My Trip
    India

    ಮಾಲ್ಡೀವ್ಸ್‌ ಬುಕ್ಕಿಂಗ್ ಕ್ಯಾನ್ಸಲ್‌ ಬಳಿಕ ‘ದೇಶ ಮೊದಲು ವ್ಯಾಪಾರ ನಂತರ’ ಎಂಬ ಸಂದೇಶ ಕಳಿಸಿದ Ease My Trip

    News DeskBy News DeskJanuary 13, 2024Updated:January 13, 2024No Comments2 Mins Read8 Views
    Facebook Twitter Pinterest Telegram LinkedIn Tumblr Email Reddit
    Share
    Facebook Twitter LinkedIn Pinterest WhatsApp Email

    ನವದೆಹಲಿ: ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ ನಂತರ ಮಾಲ್ಡೀವ್ಸ್‌ ಸಚಿವರು ಸಾಮಾಜಿಕ ಮಾಧ್ಯಮದಲ್ಲಿ ಭಾರತ ಹಾಗೂ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ನಂತರ ಭಾರತದಲ್ಲಿ ಅನೇಕರು ಮಾಲ್ಡೀವ್ಸ್‌ ಪ್ರವಾಸ ರದ್ದುಗೊಳಿಸಿದ್ದರು ಹಾಗೂ ಅನೇಕರು ಭಾರತದ ಪ್ರವಾಸೋದ್ಯಮ ಸ್ಥಳಗಳ ಪ್ರಚಾರ ಮಾಡಿದ್ದರು.

    ಈ ಉದ್ವಿಗ್ನತೆಯ ಬಳಿಕ ವಿವಿಧ ಆನ್‌ಲೈನ್ ಟ್ರಾವೆಲ್ ಏಜೆನ್ಸಿಗಳ ಮೂಲಕ ವಿಮಾನಗಳು ಮತ್ತು ಹೋಟೆಲ್ ಬುಕಿಂಗ್‌ಗಳನ್ನು ಕೆಲ ಪ್ರವಾಸಿಗರು ರದ್ದುಗೊಳಿಸಿದ್ದರು. ಈ ನಡುವೆ Ease My Trip ಮಾಲ್ಡೀವ್ಸ್‌ಗೆ ವಿಮಾನ ಟಿಕೆಟ್‌ ಬುಕ್ಕಿಂಗ್ ಆಯ್ಕೆಯನ್ನೇ ಸ್ಥಗಿತಗೊಳಿಸಿತ್ತು. ಈ ನಂತರ ಹೆಚ್ಚು ಚರ್ಚೆಗೀಡಾಗ್ತಿರೋ ಈಸ್‌ ಮೈ ಟ್ರಿಪ್‌ ಇದೀಗ ತನ್ನ ಬಳಕೆದಾರರಿಗೆ ವಾಟ್ಸಾಪ್‌ ಸಂದೇಶ ನೀಡಿದೆ.

    ಈಸ್‌ ಮೈ ಟ್ರಿಪ್‌ ಟ್ರಾವೆಲ್‌ ಏಜೆನ್ಸಿಯು ‘ದೇಶ ಮೊದಲು ವ್ಯಾಪಾರ ನಂತರ’ ಎಂಬ ನೀತಿ ನಮ್ಮದು ಎಂದು ಹೇಳಿದೆ. ಹಾಗೂ, ಈ ನಿಟ್ಟಿನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಜನರ ಬೆಂಬಲವು ರಾಷ್ಟ್ರದ ಮೇಲಿನ ಹಂಚಿಕೆಯ ಪ್ರೀತಿಯ ಪ್ರತಿಬಿಂಬವಾಗಿದೆ ಎಂದೂ ಹೇಳಿದೆ. ಹಾಗೂ, ಜನರನ್ನು ಈ ಪ್ರಯಾಣದಲ್ಲಿ ಒಗ್ಗಟ್ಟಿನಿಂದಿರಿ ಎಂದೂ ಈಸ್‌ ಮೈ ಟ್ರಿಪ್‌ ತನ್ನ ಸಂದೇಶದ ಮೂಲಕ ಮನವಿ ಮಾಡಿಕೊಂಡಿದೆ. 

    ಹಾಗಾದ್ರೆ, ಈಸ್‌ ಮೈ ಟ್ರಿಪ್‌ ಕಂಪನಿ ಬಳಕೆದಾರರಿಗೆ ವಾಟ್ಸಾಪ್‌ ಸಂದೇಶ ಕಳಿಸಿರೋದೇನು ನೋಡಿ.. ‘ದೇಶ ಮೊದಲು, ವ್ಯಾಪಾರ ನಂತರ. 2ನೇ ಅತಿದೊಡ್ಡ ಮತ್ತು ಹೆಮ್ಮೆಯ ಸ್ವದೇಶಿ ಟ್ರಾವೆಲ್ ಕಂಪನಿಯಾಗಿರುವ ಈಸ್‌ ಮೈ ಟ್ರಿಪ್ ತನ್ನ ರಾಷ್ಟ್ರದ ಘನತೆಗೆ ಆಳವಾದ ಬದ್ಧತೆ ಹೊಂದಿದೆ. ಭಾರತ, ತನ್ನ ನಾಗರಿಕರು ಮತ್ತು ನಮ್ಮ ಗೌರವಾನ್ವಿತ ಪ್ರಧಾನಿಯವರ ಬಗ್ಗೆ ಮಾಲ್ಡೀವ್ಸ್‌ನ ಅನೇಕ ಮಂತ್ರಿಗಳು ಇತ್ತೀಚಿನ ಅನುಚಿತ ಮತ್ತು ಅಪ್ರಚೋದಿತ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ನಾವು ಒಂದು ನಿಲುವನ್ನು ತೆಗೆದುಕೊಂಡಿದ್ದೇವೆ.

    ಜನವರಿ 8 ರಿಂದ, ನಾವು ಮಾಲ್ಡೀವ್ಸ್‌ಗೆ ಎಲ್ಲಾ ಪ್ರಯಾಣ ಬುಕಿಂಗ್‌ಗಳನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಿದ್ದೇವೆ. ನಮಗೆ, ಲಾಭಕ್ಕಿಂತ ನಮ್ಮ ರಾಷ್ಟ್ರವೇ ಆದ್ಯತೆಯನ್ನು ಪಡೆಯುತ್ತದೆ. 

    ಭಾರತದ ಬೆರಗುಗೊಳಿಸುವ ಕಡಲತೀರಗಳ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ. ಲಕ್ಷದ್ವೀಪ, ಅಂಡಮಾನ್, ಗೋವಾ, ಕೇರಳ ಇತ್ಯಾದಿ ಅದ್ಭುತಗಳನ್ನು ಒಳಗೊಂಡಿರುವ ನಮ್ಮ ದೇಶವು 7,500 ಕಿಲೋಮೀಟರ್ ವಿಸ್ತಾರವಾದ ಕರಾವಳಿಯನ್ನು ಹೊಂದಿದೆ.

    ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಬೆಂಬಲವು ರಾಷ್ಟ್ರದ ಮೇಲಿನ ನಮ್ಮ ಹಂಚಿಕೆಯ ಪ್ರೀತಿಯ ಪ್ರತಿಬಿಂಬವಾಗಿದೆ. ಈ ಪಯಣದಲ್ಲಿ ಒಗ್ಗಟ್ಟಾಗಿ ಇರೋಣ.

    ಜೈ ಹಿಂದ್!’ ಎಂಬ ವಿವರವಾದ ಸಂದೇಶವನ್ನು ವಾಟ್ಸಾಪ್‌ ಮೂಲಕ ಕಳಿಸಿದೆ. 

    ಪ್ರಯಾಣದ ರಿಯಾಯಿತಿಗಳಿಗಾಗಿ EaseMyTrip ಕೋಡ್‌!
    ಇತ್ತೀಚೆಗೆ, EaseMyTrip ನ CEO ನಿಶಾಂತ್ ಪಿಟ್ಟಿ, ರಿಯಾಯಿತಿಗಳನ್ನು ಪಡೆಯಲು ಪ್ರಯಾಣಿಕರು ಬಳಸಬಹುದಾದ ಕೋಡ್‌ಗಳನ್ನು X (ಈ ಹಿಂದಿನ ಟ್ವಿಟ್ಟರ್‌) ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

    “ಈಗ ಉತ್ತಮ ರಿಯಾಯಿತಿಗಳನ್ನು ಪಡೆಯಲು EaseMyTrip ನಲ್ಲಿ NATIONFIRST ಅಥವಾ BHARATFIRST ರಿಯಾಯಿತಿ ಕೋಡ್‌ಗಳನ್ನು ಬಳಸಿ” ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಮಾಲ್ಡೀವ್ಸ್‌ಗೆ ಎಲ್ಲಾ ವಿಮಾನ ಮತ್ತು ಹೋಟೆಲ್ ಬುಕಿಂಗ್ ಅನ್ನು ಅಮಾನತುಗೊಳಿಸಿದ ಮೊದಲ ಕಂಪನಿಗಳಲ್ಲಿ EaseMyTrip ಕೂಡ ಸೇರಿದೆ.

    India Lakshadweep Maldives
    Share. Facebook Twitter Pinterest LinkedIn Reddit WhatsApp Telegram Email
    Previous Articleಜಿಲ್ಲೆಯಲ್ಲಿ 70,000 ಕ್ಕೂ ಅಧಿಕ ಕುಶಲಕರ್ಮಿಗಳು ತರಬೇತಿಗಾಗಿ ನೋಂದಣಿ
    Next Article ಸೇನೆ ವಾಪಸ್ ಕರೆಸಿಕೊಳ್ಳಲು ಭಾರತಕ್ಕೆ ಗಡುವು ಕೊಟ್ಟ ಮಾಲ್ಡೀವ್ಸ್ ಅಧ್ಯಕ್ಷ
    News Desk

    Related Posts

    ಗುಜರಾತ್‌ನಿಂದ ಮುಂಬೈಗೆ ಮೊದಲ ಸ್ವದೇಶಿ ಬುಲೆಟ್ ರೈಲು

    April 26, 2026

    ತ್ರಿಶೂರ್ ಪೂರಂ ಉತ್ಸವದ ಸಿದ್ಧತೆಯಲ್ಲಿದ್ದಾಗ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ, 13 ಮಂದಿ ಸಾವು

    April 21, 2026

     ಸಂಸದರಿಗೆ ಮೋದಿ ಕೊನೇಕ್ಷಣದ ಮನವಿ

    April 17, 2026
    Demo
    Top Posts

    ಬೋಳೂರ್ ನಲ್ಲಿ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುಆಯೋಜಿಸಲಾಯಿತು

    July 8, 202489 Views

    ಇಂದು ಸಂಜೆ ಶಿವಧೂತ ಗುಳಿಗೆ ನಾಟಕದ 579ನೇ ಸಂಚಿಕೆ ಬಹರೇನ್ ನಲ್ಲಿ ಪ್ರಧರ್ಶಿಸಲಾಗುವುದು

    February 9, 202483 Views

    ಬೃಂದಾವಣಿ ಭರತನಾಟ್ಯ ರಂಗಪ್ರವೇಶ ಮೇ 3 ರಂದು ಜರುಗಲಿದೆ

    May 2, 202425 Views

    ರಶ್ಮಿಕಾ ಮಂದಣ್ಣ ಬಲಗಾಲಿಗೆ ಗಾಯ

    January 11, 202523 Views
    Don't Miss
    India April 26, 2026

    ಗುಜರಾತ್‌ನಿಂದ ಮುಂಬೈಗೆ ಮೊದಲ ಸ್ವದೇಶಿ ಬುಲೆಟ್ ರೈಲು

    ಭಾರತವು ಮೊದಲ ಸ್ವದೇಶಿ ಬುಲೆಟ್ ರೈಲು 2027ರ ವೇಳೆಗೆ ಚಾಲನೆಗೆ ಬರುವ ನಿರೀಕ್ಷೆಯಿದೆ. ಬುಲೆಟ್ ರೈಲು ಇದೇ ವರ್ಷದ ಆಗಸ್ಟ್…

    ಭಾರತಿ ಅಸೋಸಿಯೇಷನ್ ​​ವತಿಯಿಂದ ಜಾಗತಿಕ ಸಾಹಸಿ ಡಾ.ಸಿಂಗಾರ ವಡಿವೇಲ್ಅವರನ್ನು ಸನ್ಮಾನಿಸಿಲಾಯಿತು

    ಬಿಜೆಪಿ ಸೇರಿದ ರಾಘವ್ ಚಡ್ಡಾ

    ತ್ರಿಶೂರ್ ಪೂರಂ ಉತ್ಸವದ ಸಿದ್ಧತೆಯಲ್ಲಿದ್ದಾಗ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ, 13 ಮಂದಿ ಸಾವು

    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo

    Subscribe to Updates

    Get the latest creative news from SmartMag about art & design.

    Demo
    About Us
    About Us

    "Welcome to Star Vision Kannada, your trusted source for breaking news, in-depth stories, and the latest happenings

    Email Us: starvisionkannada@gmail.com
    Contact: +973 33638343

    Facebook X (Twitter) Instagram YouTube
    Our Picks

    ಗುಜರಾತ್‌ನಿಂದ ಮುಂಬೈಗೆ ಮೊದಲ ಸ್ವದೇಶಿ ಬುಲೆಟ್ ರೈಲು

    ಭಾರತಿ ಅಸೋಸಿಯೇಷನ್ ​​ವತಿಯಿಂದ ಜಾಗತಿಕ ಸಾಹಸಿ ಡಾ.ಸಿಂಗಾರ ವಡಿವೇಲ್ಅವರನ್ನು ಸನ್ಮಾನಿಸಿಲಾಯಿತು

    ಬಿಜೆಪಿ ಸೇರಿದ ರಾಘವ್ ಚಡ್ಡಾ

    Most Popular

    ವಿಮಾನ ತಡವಾಗಿ ಹೊರಡಲಿದೆ ಎಂದು ಘೋಷಿಸಿದ ಪೈಲಟ್​ ಮೇಲೆ ಪ್ರಯಾಣಿಕನಿಂದ ಹಲ್ಲೆ

    January 15, 20240 Views

    ಉಡುಪಿಯಲ್ಲಿ ಪರ್ಯಾಯ ಮೆರವಣಿಗೆ

    January 17, 20240 Views

    ಉಡುಪಿಯ ಕಂಟೆಂಟ್ ಕ್ರಿಯೇಟರ್ ಅಶ್ವಿನಿ ಶೆಟ್ಟಿ ನಿಧನ

    July 16, 20240 Views
    © 2026 Starvision. Designed by ThemeSphere.
    • Home
    • Lifestyle
    • World
    • Travel

    Type above and press Enter to search. Press Esc to cancel.