Close Menu

    Subscribe to Updates

    Get the latest creative news from FooBar about art, design and business.

    What's Hot

    ಬಹರೈನ್ ಕನ್ನಡ ಸಂಘದ ಸಂಗೀತ ಸಂಜೆ – “ಅಮರ ಮಧುರ ಗೀತೆ”, ಹಳೆಯ ಕನ್ನಡ ಹಾಡುಗಳ ಮಾಧುರ್ಯದಲ್ಲಿ ಮಿಂದೆದ್ದ ಕನ್ನಡಿಗರು

    ವಂದೇ ಮಾತರಂ ಸ್ವಾತಂತ್ರ್ಯೋತ್ಸವದಂದು ಮೊಳಗಲಿದೆ

    ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಮತ್ತೊಂದು ಸುವರ್ಣ ಅಧ್ಯಾಯ ಆರಂಭ

    Facebook X (Twitter) Instagram
    Trending
    • ಬಹರೈನ್ ಕನ್ನಡ ಸಂಘದ ಸಂಗೀತ ಸಂಜೆ – “ಅಮರ ಮಧುರ ಗೀತೆ”, ಹಳೆಯ ಕನ್ನಡ ಹಾಡುಗಳ ಮಾಧುರ್ಯದಲ್ಲಿ ಮಿಂದೆದ್ದ ಕನ್ನಡಿಗರು
    • ವಂದೇ ಮಾತರಂ ಸ್ವಾತಂತ್ರ್ಯೋತ್ಸವದಂದು ಮೊಳಗಲಿದೆ
    • ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಮತ್ತೊಂದು ಸುವರ್ಣ ಅಧ್ಯಾಯ ಆರಂಭ
    • ಭಾರತದ ಹಲವೆಡೆ ಭಾರಿ ಮಳೆಯ ಸಾಧ್ಯತೆ
    • ಭಾರತದ ಮೊದಲ ಖಾಸಗಿ ರಾಕೆಟ್, ವಿಕ್ರಮ್-1 ಅನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು
    • ಶಾಲೆಗಳಿಂದ ಮಳೆ ರಜೆ ಆದೇಶ ಉಲ್ಲಂಘನೆ, ಜಿಲ್ಲಾಡಳಿತದಿಂದ ಕಠಿಣ ಕ್ರಮ
    • ಪ್ರಕಾಶ್ ರಾಜ್ ಗೆ ಬೈಲ್ ಮಂಜೂರ್
    • 5 ಜಿಲ್ಲೆಗಳಲ್ಲಿ ಭಾರಿ ಮಳೆ ಇದ್ದು ಶಾಲೆಗಳಿಗೆ ನಾಳೆ ರಜೆ ನೀಡಲಾಗಿದೆ
    Facebook X (Twitter) Instagram YouTube
    Starvision Kannada
    • Home
    • Bahrain
    • Middle East
    • India
    • Karnataka
    • World
    Starvision Kannada
    You are at:Home » ಬಹರೈನ್ ಕನ್ನಡ ಸಂಘದ ಸಂಗೀತ ಸಂಜೆ – “ಅಮರ ಮಧುರ ಗೀತೆ”, ಹಳೆಯ ಕನ್ನಡ ಹಾಡುಗಳ ಮಾಧುರ್ಯದಲ್ಲಿ ಮಿಂದೆದ್ದ ಕನ್ನಡಿಗರು
    India

    ಬಹರೈನ್ ಕನ್ನಡ ಸಂಘದ ಸಂಗೀತ ಸಂಜೆ – “ಅಮರ ಮಧುರ ಗೀತೆ”, ಹಳೆಯ ಕನ್ನಡ ಹಾಡುಗಳ ಮಾಧುರ್ಯದಲ್ಲಿ ಮಿಂದೆದ್ದ ಕನ್ನಡಿಗರು

    News DeskBy News DeskNovember 7, 2026Updated:November 7, 2026No Comments3 Mins Read2 Views
    Facebook Twitter Pinterest Telegram LinkedIn Tumblr Email Reddit
    Share
    Facebook Twitter LinkedIn Pinterest WhatsApp Email

    ಮನಾಮ : ಬಹರೈನ್: ಹಳೆಯ ಕನ್ನಡ ಚಿತ್ರಗೀತೆಗಳ ಸುಮಧುರ ಲೋಕದಲ್ಲಿ ಸಂಗೀತ ಪ್ರೇಮಿಗಳನ್ನು ಮಿಂದೆಬ್ಬಿಸಿದ ಬಹರೈನ್ ಕನ್ನಡ ಸಂಘದ ಜನಪ್ರಿಯ ಸಂಗೀತ ಕಾರ್ಯಕ್ರಮ ‘ಅಮರ ಮಧುರ ಗೀತೆ – ಕನ್ನಡ ವೈಭವ 2026’ ಅಕ್ಟೋಬರ್ 29, 2026ರಂದು ಮನಾಮದ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಅದ್ದೂರಿಯಾಗಿ ಜರುಗಿತು. ಕನ್ನಡ ಚಿತ್ರರಂಗದ ಸುವರ್ಣಯುಗದ ಅಮರ ಗೀತೆಗಳು, ಭಾವಪೂರ್ಣ ಗಾಯನ, ಆಕರ್ಷಕ ನೃತ್ಯ ಪ್ರದರ್ಶನಗಳು ಹಾಗೂ ಗಣ್ಯರ ಉಪಸ್ಥಿತಿಯಿಂದ ಕಾರ್ಯಕ್ರಮವು ಸಂಗೀತ ಮತ್ತು ಸಾಂಸ್ಕೃತಿಕ ಸಂಭ್ರಮದ ಸುಂದರ ಸಂಗಮವಾಗಿ ಮೂಡಿಬಂತು.

    ಬಹರೈನ್ ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಭಾಷೆ, ಕಲೆ ಮತ್ತು ಸಂಸ್ಕೃತಿಯನ್ನು ಅನಿವಾಸಿ ಕನ್ನಡಿಗರ ನಡುವೆ ಜೀವಂತವಾಗಿರಿಸುವಲ್ಲಿ ಸಂಘದ ಸಾಂಸ್ಕೃತಿಕ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿದರು.

    ಸಂಘದ ನಿಕಟಪೂರ್ವ ಅಧ್ಯಕ್ಷರು ಹಾಗೂ ಕಾರ್ಯಕ್ರಮ ಸಂಚಾಲಕರಾದ ಅಮರನಾಥ್ ರೈ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪದಾಧಿಕಾರಿಗಳು, ಕಾರ್ಯಕರ್ತರು, ಪ್ರಾಯೋಜಕರು ಹಾಗೂ ಸದಸ್ಯರನ್ನು ಕೃತಜ್ಞತೆಯಿಂದ ಸ್ಮರಿಸಿದರು.

    ಸಂಘದ ಪ್ರಧಾನ ಕಾರ್ಯದರ್ಶಿ ರಾಮ್ ಪ್ರಸಾದ್ ಅಮ್ಮೆನಡ್ಕ ಅವರು ಸಭಾ ಕಾರ್ಯಕ್ರಮವನ್ನು ನಿರೂಪಿಸಿ, ಅತಿಥಿಗಳನ್ನು ಸ್ವಾಗತಿಸಿದರು ಹಾಗೂ ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದರು.

    ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಹಾಗೂ ನಿರ್ಮಾಪಕ ಗುರುಕಿರಣ್ ಅವರ ಉಪಸ್ಥಿತಿ ಮತ್ತು ಅಮೋಘ ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಅವರೊಂದಿಗೆ ಹೃದಯ್ ಕಿರಣ್, ಯುವ ಗಾಯಕ ಶಮೀರ್ ಮುಡಿಪು, ಯುವ ಗಾಯಕಿ ಸುವಿನ್ಯಾ ಆಚಾರ್ಯ, ಉದ್ಯಮಿ ಹಾಗೂ ಗಾಯಕ ಪ್ರಶಾಂತ್ ರೈ, ಕತಾರ್‌ನಿಂದ ಆಗಮಿಸಿದ ಅನಿಲ್ ಭಾಸಗಿ ಮತ್ತು ಪ್ರದೀಪ್ ಆಚಾರ್ಯ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ತಮ್ಮ ಸುಮಧುರ ಗಾಯನದ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು.

    ಮೈಸೂರಿನ ಇತಿಹಾಸ ತಜ್ಞರು ಹಾಗೂ ‘ಮೈಸೂರಿನ ಕಥೆಗಳು’ ಯೂಟ್ಯೂಬ್ ಚಾನೆಲ್ ಖ್ಯಾತಿಯ ಧರ್ಮೇಂದ್ರ ಕುಮಾರ್ ಅವರು ತಮ್ಮ ವಿಚಾರಗಳು ಮತ್ತು ಅನುಭವಗಳ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ವೈಚಾರಿಕ ಆಯಾಮ ನೀಡಿದರು. ನ್ಯೂ ಮಂಗಳೂರು ಟೈಮ್ಸ್ ಪತ್ರಿಕೆಯ ಪತ್ರಕರ್ತ ಪೂರ್ಣ ಪ್ರಕಾಶ್ ಚಂದ್ರ ಹಾಗೂ ಉದ್ಯಮಿ ಪ್ರಶಾಂತ್ ರೈ ಅವರು ಅತಿಥಿಗಳಾಗಿ ಉಪಸ್ಥಿತರಿದ್ದರು.

    ಖ್ಯಾತ ನಿರೂಪಕಿ ಹಾಗೂ ಬಿಗ್ FM 92.7 ಮಂಗಳೂರು ಮ್ಯೂಸಿಕ್ ಮ್ಯಾನೇಜರ್ ಆರ್.ಜೆ. ನಯನಾ ಶೆಟ್ಟಿ ಮತ್ತು ಕಮಲಾಕ್ಷ ಅಮೀನ್ ಅವರು ಸಹನಿರೂಪಕರಾಗಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಕನ್ನಡ ಸಂಘದ ಪ್ರತಿಭಾವಂತ ನೃತ್ಯಪಟುಗಳ ವೈವಿಧ್ಯಮಯ ನೃತ್ಯ ಪ್ರದರ್ಶನಗಳು ಸಂಗೀತ ಸಂಜೆಗೆ ಮತ್ತಷ್ಟು ರಂಗು ತುಂಬಿದವು.

    1980 ಮತ್ತು 90ರ ದಶಕಗಳ ಜನಪ್ರಿಯ ಕನ್ನಡ ಚಿತ್ರಗೀತೆಗಳು ಸಭಿಕರನ್ನು ಹಳೆಯ ನೆನಪುಗಳ ಲೋಕಕ್ಕೆ ಕರೆದೊಯ್ದವು. ಅರ್ಥಪೂರ್ಣ ಸಾಹಿತ್ಯ, ಇಂಪಾದ ಸಂಗೀತ ಮತ್ತು ಭಾವಪೂರ್ಣ ಗಾಯನದ ಮೂಲಕ ಕನ್ನಡ ಚಿತ್ರಸಂಗೀತದ ಶ್ರೀಮಂತ ಪರಂಪರೆ ಮತ್ತೊಮ್ಮೆ ಅನಾವರಣಗೊಂಡಿತು.

    2007ರಲ್ಲಿ ಆರಂಭಗೊಂಡ ‘ಅಮರ ಮಧುರ ಗೀತೆ’ ಕಾರ್ಯಕ್ರಮವು ಹಳೆಯ ಕನ್ನಡ ಚಿತ್ರಗೀತೆಗಳ ಸೌಂದರ್ಯವನ್ನು ಅನಿವಾಸಿ ಕನ್ನಡಿಗರಿಗೆ ಪರಿಚಯಿಸುವುದರೊಂದಿಗೆ, ಹೊಸ ತಲೆಮಾರಿಗೆ ಕನ್ನಡ ಸಂಗೀತ ಪರಂಪರೆಯನ್ನು ತಲುಪಿಸುವ ಮಹತ್ವದ ವೇದಿಕೆಯಾಗಿದೆ.

    ಕಾರ್ಯಕ್ರಮದ ಸಂದರ್ಭದಲ್ಲಿ ಅತಿಥಿ ಗಣ್ಯರು, ಕಲಾವಿದರು ಹಾಗೂ ಪ್ರಾಯೋಜಕರನ್ನು ಕನ್ನಡ ಸಂಘದ ವತಿಯಿಂದ ಗೌರವಿಸಲಾಯಿತು. ಗೌರವಿಸಲ್ಪಟ್ಟ ಗಣ್ಯರಲ್ಲಿ ಗುರುಕಿರಣ್, ಹೃದಯ್ ಕಿರಣ್, ಧರ್ಮೇಂದ್ರ ಕುಮಾರ್, ಪೂರ್ಣ ಪ್ರಕಾಶ್ ಚಂದ್ರ, ಪ್ರಶಾಂತ್ ರೈ, ಆರ್.ಜೆ. ನಯನಾ ಶೆಟ್ಟಿ, ಶಮೀರ್ ಮುಡಿಪು, ಸುವಿನ್ಯಾ ಆಚಾರ್ಯ ಹಾಗೂ ಶಿವಪಾಲ್ ಪ್ರಮುಖರು.

    ಕಾರ್ಯಕ್ರಮಕ್ಕೆ ಮಹಾ ಪ್ರಾಯೋಜಕರಾಗಿ ಸಹಕರಿಸಿದ ಬಿ.ಎಂ.ಎಂ.ಐ. ಶಾಪ್ಸ್ ಸಂಸ್ಥೆಯ ಹಿರಿಯ ಸೇಲ್ಸ್ ಮ್ಯಾನೇಜರ್ ರಾಜೀವ್ ಮೆನನ್ ಹಾಗೂ ಖ್ಯಾತ ಉದ್ಯಮಿ ಮತ್ತು ಹಿರಿಯ ಸಮಾಜಸೇವಕ ಡಾ. ರೋನಾಲ್ಡ್ ಕುಲಾಸೋ (ಯುಎಇ) ಅವರ ಸಹಕಾರವನ್ನು ಸಂಘವು ಕೃತಜ್ಞತೆಯಿಂದ ಸ್ಮರಿಸಿ ಗೌರವಿಸಿತು.

    ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಸಂಚಾಲಕರು ಹಾಗೂ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಅಮರನಾಥ್ ರೈ ಮತ್ತು ನಿರೂಪಣೆ ಹಾಗೂ ಕಾರ್ಯಕ್ರಮದ ಸಂಯೋಜನೆಯಲ್ಲಿ ಸಹಕರಿಸಿದ ಕಮಲಾಕ್ಷ ಅಮೀನ್ ಅವರನ್ನು ಗೌರವಿಸಲಾಯಿತು.

    ಪ್ರಾಯೋಜಕರು, ಕಲಾವಿದರು, ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸದಸ್ಯರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

    ಸಂಘದ ಸದಸ್ಯರ ಗಾಯನ ಹಾಗೂ ನೃತ್ಯವೈವಿಧ್ಯ ಸಭಿಕರನ್ನು ರಂಜಿಸಿತು.

    ಹಳೆಯ ಕನ್ನಡ ಚಿತ್ರಗೀತೆಗಳ ಮಾಧುರ್ಯವನ್ನು ಮತ್ತೆ ಮನದಂಗಳದಲ್ಲಿ ಅರಳಿಸಿದ ‘ಅಮರ ಮಧುರ ಗೀತೆ’ ಸಂಗೀತ ಸಂಜೆ ಕನ್ನಡಿಗರಿಗೆ ಸವಿನೆನಪಿನ ಪಯಣವಾಯಿತು. ಸಂಗೀತದ ಮೂಲಕ ಕನ್ನಡ ಮನಸ್ಸುಗಳನ್ನು ಬೆಸೆಯುವ ಬಹರೈನ್ ಕನ್ನಡ ಸಂಘದ ಸಾಂಸ್ಕೃತಿಕ ಪಯಣಕ್ಕೆ ಈ ಕಾರ್ಯಕ್ರಮ ಮತ್ತೊಂದು ಮಧುರ ಅಧ್ಯಾಯವನ್ನು ಸೇರಿಸಿತು.

    amara madhura geethe Bahrain Guru Kiran kannada sangha
    Share. Facebook Twitter Pinterest LinkedIn Reddit WhatsApp Telegram Email
    Previous Articleವಂದೇ ಮಾತರಂ ಸ್ವಾತಂತ್ರ್ಯೋತ್ಸವದಂದು ಮೊಳಗಲಿದೆ
    News Desk

    Related Posts

    ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಮತ್ತೊಂದು ಸುವರ್ಣ ಅಧ್ಯಾಯ ಆರಂಭ

    July 19, 2026

    ಭಾರತದ ಹಲವೆಡೆ ಭಾರಿ ಮಳೆಯ ಸಾಧ್ಯತೆ

    July 18, 2026

    ಭಾರತದ ಮೊದಲ ಖಾಸಗಿ ರಾಕೆಟ್, ವಿಕ್ರಮ್-1 ಅನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು

    July 18, 2026
    Demo
    Top Posts

    ಬೋಳೂರ್ ನಲ್ಲಿ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುಆಯೋಜಿಸಲಾಯಿತು

    July 8, 202494 Views

    ಇಂದು ಸಂಜೆ ಶಿವಧೂತ ಗುಳಿಗೆ ನಾಟಕದ 579ನೇ ಸಂಚಿಕೆ ಬಹರೇನ್ ನಲ್ಲಿ ಪ್ರಧರ್ಶಿಸಲಾಗುವುದು

    February 9, 202489 Views

    ಕಾರ್ಮಿಕ ಸಚಿವರು ವೃತ್ತಿಜೀವನದ ದಿನವನ್ನು ಉದ್ಘಾಟಿಸಿದರು

    May 19, 202442 Views

    ಗುಕೇಶ್ ದೊಮ್ಮರಾಜು ಅವರ ಐತಿಹಾಸಿಕ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಜಯ

    December 13, 202434 Views
    Don't Miss
    India November 7, 2026

    ಬಹರೈನ್ ಕನ್ನಡ ಸಂಘದ ಸಂಗೀತ ಸಂಜೆ – “ಅಮರ ಮಧುರ ಗೀತೆ”, ಹಳೆಯ ಕನ್ನಡ ಹಾಡುಗಳ ಮಾಧುರ್ಯದಲ್ಲಿ ಮಿಂದೆದ್ದ ಕನ್ನಡಿಗರು

    ಮನಾಮ : ಬಹರೈನ್: ಹಳೆಯ ಕನ್ನಡ ಚಿತ್ರಗೀತೆಗಳ ಸುಮಧುರ ಲೋಕದಲ್ಲಿ ಸಂಗೀತ ಪ್ರೇಮಿಗಳನ್ನು ಮಿಂದೆಬ್ಬಿಸಿದ ಬಹರೈನ್ ಕನ್ನಡ ಸಂಘದ ಜನಪ್ರಿಯ…

    ವಂದೇ ಮಾತರಂ ಸ್ವಾತಂತ್ರ್ಯೋತ್ಸವದಂದು ಮೊಳಗಲಿದೆ

    ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಮತ್ತೊಂದು ಸುವರ್ಣ ಅಧ್ಯಾಯ ಆರಂಭ

    ಭಾರತದ ಹಲವೆಡೆ ಭಾರಿ ಮಳೆಯ ಸಾಧ್ಯತೆ

    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo

    Subscribe to Updates

    Get the latest creative news from SmartMag about art & design.

    Demo
    About Us
    About Us

    "Welcome to Star Vision Kannada, your trusted source for breaking news, in-depth stories, and the latest happenings

    Email Us: starvisionkannada@gmail.com
    Contact: +973 33638343

    Facebook X (Twitter) Instagram YouTube
    Our Picks

    ಬಹರೈನ್ ಕನ್ನಡ ಸಂಘದ ಸಂಗೀತ ಸಂಜೆ – “ಅಮರ ಮಧುರ ಗೀತೆ”, ಹಳೆಯ ಕನ್ನಡ ಹಾಡುಗಳ ಮಾಧುರ್ಯದಲ್ಲಿ ಮಿಂದೆದ್ದ ಕನ್ನಡಿಗರು

    ವಂದೇ ಮಾತರಂ ಸ್ವಾತಂತ್ರ್ಯೋತ್ಸವದಂದು ಮೊಳಗಲಿದೆ

    ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಮತ್ತೊಂದು ಸುವರ್ಣ ಅಧ್ಯಾಯ ಆರಂಭ

    Most Popular

    ಬಹರೈನ್ ಕನ್ನಡ ಸಂಘದ ಸಂಗೀತ ಸಂಜೆ – “ಅಮರ ಮಧುರ ಗೀತೆ”, ಹಳೆಯ ಕನ್ನಡ ಹಾಡುಗಳ ಮಾಧುರ್ಯದಲ್ಲಿ ಮಿಂದೆದ್ದ ಕನ್ನಡಿಗರು

    November 7, 20262 Views

    ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿ ದುರ್ಘಟನೆ

    June 26, 20264 Views

    ಉಪ ರಾಜ ಹಿಸ್ ರಾಯಲ್ ಹೈನೆಸ್ ಪ್ರಿನ್ಸ್ ಸಲ್ಮಾನ್ ಬಿನ್ ಹಮದ್ ಅಲ್ ಖಲೀಫಾ ಅವರು ಬಹ್ರೇನ್ ಅಂತರಾಷ್ಟ್ರೀಯ ವೈಮಾನಿಕ ಪ್ರದರ್ಶನವನ್ನು ಉದ್ಘಾಟಿಸಿದರು

    November 13, 20245 Views
    © 2026 Starvision. Designed by ThemeSphere.
    • Home
    • Lifestyle
    • World
    • Travel

    Type above and press Enter to search. Press Esc to cancel.