ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಅಂದಾಜು ರೂ. 9,072 ಕೋಟಿ ವೆಚ್ಚದ ರೈಲ್ವೆ ಸಚಿವಾಲಯದ ಮೂರು ಪ್ರಮುಖ ಮಲ್ಟಿಟ್ರ್ಯಾಕ್ ಯೋಜನೆಗಳಿಗೆ ಅನುಮೋದನೆ ನೀಡಿದೆ. ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲವನ್ನು ಸುಮಾರು 307 ಕಿ.ಮೀ.ಗಳಷ್ಟು ವಿಸ್ತರಿಸಲಿವೆ.
ಅನುಮೋದಿತ ಯೋಜನೆಗಳಲ್ಲಿ ಗೊಂಡಿಯಾ-ಜಬಲ್ಪುರ ಡಬ್ಲಿಂಗ್, ಪುನರಖ್-ಕಿಯುಲ್ ಮೂರನೇ ಮತ್ತು ನಾಲ್ಕನೇ ಮಾರ್ಗ ಮತ್ತು ಗಮ್ಹರಿಯಾ-ಚಾಂಡಿಲ್ ಮೂರನೇ ಮತ್ತು ನಾಲ್ಕನೇ ಮಾರ್ಗ ಸೇರಿವೆ. ಈ ಯೋಜನೆಗಳು ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ ಮತ್ತು ಜಾರ್ಖಂಡ್ನಾದ್ಯಂತ ಎಂಟು ಜಿಲ್ಲೆಗಳನ್ನು ವ್ಯಾಪಿಸುತ್ತವೆ.
