ಜುಲೈ 1ರಿಂದ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ ಭಾರೀ ದಂಡ ವಿಧಿಸಲು ನಿರ್ಧರಿಸಲಾಗಿದೆ. ಭಾರತೀಯ ರೈಲ್ವೆಯಲ್ಲಿ ಟಿಕೆಟ್ ಇಲ್ಲದೆ ಅಥವಾ ಅನಧಿಕೃತವಾಗಿ ಪ್ರಯಾಣ ಮಾಡುವುದು ನಿಷೇದಿಸಲಾಗಿದೆ.
ರೈಲ್ವೆ ಆದಾಯ ಹೆಚ್ಚಿಸುವುದಕ್ಕೂ, ಪ್ರಯಾಣಿಕರ ನಡುವೆ ಶಿಸ್ತು ಕಾಯ್ದುಕೊಳ್ಳುವುದಕ್ಕೂ ಮಾಡಿದ ಬದಲಾವಣೆಯಾಗಿದೆ. ಹೊಸ ನಿಯಮವು ರೈಲ್ವೇ ಆಕ್ಟ್ 1989ನ ಸೆಕ್ಷನ್ 137 ಮತ್ತು 138 ಅಡಿಯಲ್ಲಿ ಜನ ವಿಶ್ವಾಸ ಆಕ್ಟ್ 2026ರ ಮೂಲಕ ಜಾರಿಗೊಳ್ಳುತ್ತಿದೆ.
ಇದುವರೆಗೆ ರೈಲಿನಲ್ಲಿ ಟಿಕೆಟ್ ರಹಿತ ಪ್ರಯಾಣಕ್ಕೆ ಕನಿಷ್ಠ 250 ರೂಪಾಯಿ ದಂಡ ವಿಧಿಸಲಾಗುತ್ತಿತ್ತು. ಅದನ್ನು ದುಪ್ಪಟ್ಟುಗೊಳಿಸಲಾಗಿದೆ. ಟಿಕೆಟ್ ಇಲ್ಲದೇ ಪ್ರಯಾಣಿಸಿದ್ರೆ ಕನಿಷ್ಠ 500 ರೂಪಾಯಿ ದಂಡ ವಿಧಿಸಲು ನಿರ್ಧರಿಸಲಾಗಿದೆ.
